ನನಗೆ ನೆನ್ನೆ ಒಂದು ಕನಸು ಬಿತ್ತು. ಸರಿ ನಿದ್ದೆ ಇಂದ ಎದ್ದ ಮೇಲೆ ಜ್ನಾಪಕವಾಗಿ ಕನಸಿನ ಬಗ್ಗೆ ಬರೀಬೇಕು ಅಂತ ಅಂದುಕೋತಾ ಇದ್ದೆ. ಈ ಕನಸು ನನಿಗೆ ಒಂಥರಾ ಹೇಳಿಕೊಲ್ಲ್ದೆ ಇರೋ ಭಾವನೆ ಹುಟ್ಟುಹಾಕಿತು. ಏನೋ ಒಂದು ಅನುಭೂತಿ.
ಕತೆ ಶುರುವಾಗೋದು ಒಂದು ವಿಚಿತ್ರ ಮಟ್ಟದಲ್ಲಿ. ನಾನು ನನ್ನ ಪ್ರಿಯತಮೆಯನ್ನ ಕಿರಾತಕರ ಕೈ ಇಂದ ಬಚಾವು ಮಾಡಲಿಕ್ಕಿ ತುಂಬಾ ಪ್ರಯತ್ನಿಸುತ್ತಿರ್ತೀನಂತೆ. ನಾನು ಅವಳು ಒಂದು ಮುರುಕು ಗುಡಿಸಿಲಿನಲ್ಲಿ ಬಚ್ಚಿಟಕೋಳಕ್ಕೆ ಪ್ರಯತ್ನಿಸ್ತಿರ್ತೀವಂತೆ.
ಆ ಗುಡಿಸಲು ಮುರುಕಾಗಿ ಪಾಳು ಬಿದ್ದಿರೋ ಕಟ್ಟಡಗಳ ಮದ್ದ್ಯೇ ಇದೆ. ಅಲ್ಲಲ್ಲಿ ಸೌದೆಗಳ ರಾಶಿ ಇದೆ. ಅದರ ಸಂದಿ ಗೊಂದಿಗಳಲ್ಲಿ ಬಾಗಿ ಓಡುತಿದ್ದೇವೆ. ಒಬ್ಬ ಘಟಾನುಘಟಿ ನಮ್ಮನ ಹುಡುಕಿಕೊಂಡು ಒಳಗೆ ಬಂದ. ತಕ್ಷಣ ನಾವು ಒಂದು ಸೌದೆ ರಾಶಿ ಹಿಂದೆ ಅಡುಗಿ ಕೊಂಡೆವು. ನನ್ನವಳು ಕಂಪಿಸಿತ್ತಿದಾಳೆ. ಅವಳನ್ನು ಅವಡುಗಚ್ಚಿ ಹಿಡ್ಕೊಂಡೆ.
ಅಂಥ ತಳಮಳ ಸ್ಥಿಥಿಯಲ್ಲೂ ಅವಳು ನನ್ನೋದನಿದ್ದಳಲ್ಲಾ ಎನ್ನುವುದೇ ನನಗೆ ಸಮಾದಾನ. ಅದಕ್ಕಿಂತಾ ಅವಳು ನನ್ನ ಜೊತೆಯೇ ಬರುತಿದ್ದಳಲ್ಲಾ ಅನ್ನುವುದೇ ಖುಷಿ. ಅಂದರೆ ಅವಳು ನನ್ನ ಪ್ರೇಮವನ್ನ ಸ್ವೀಕರಿಸಿದ್ದಾಳೆ. ಸ್ವರ್ಗ ಮೂರೆಗೇಣು.